ಹಿಂದೂ ಧರ್ಮದ 18 ಪುರಾಣಗಳಲ್ಲಿ ಒಂದು ಅನಿಸಿದ ಸ್ಕಂದ ಪುರಾಣದಲ್ಲಿ ಪಾರ್ವತಿ ದೇವಿಯು ಪರಮೇಶ್ವರ ದೇವರನ್ನು ಕುತೂಹಲದಿಂದ ಕೇಳುತ್ತಾಳೆ “ಸ್ವಾಮಿ ತಮಗೆ ಜಗತ್ತಿನಲ್ಲಿ ಅತ್ಯಂತ ಪ್ರೀತಿ ಪಾತ್ರವಾದ ಕ್ಷೇತ್ರ ಯಾವುದು?” ಶಿವ ತನ್ನ ಪ್ರೀತಿಯ ಮಡದಿಗೆ ಹೀಗೆ ಉತ್ತರಿಸುತ್ತಾನೆ “ಶೃಣು ದೇವಿಯೇ ಕೇಳು, ನನಗೆ ಆದಿ ಕೈಲಾಸಕ್ಕಿಂತಲೂ ಒಂದು ಪಟ್ಟು ಹೆಚ್ಚಿನ ಪ್ರೀತಿ ಭೂ ಕೈಲಾಸ ಗಿರಿಯಲ್ಲಿದೆ. ಯಾರು ಅಲ್ಲಿ ಆಟಿ ಅಮಾವಾಸ್ಯೆಯ ದಿನ ಶೃದ್ಧ ಭಕ್ತಿಯಿಂದ ಬಂದು ತೀರ್ಥ ಸ್ನಾನ ಮಾಡಿ ನನ್ನನ್ನು ಭಕ್ತಿಯಿಂದ ಭಜಿಸುತ್ತಾರೋ ಅವರಿಗೆ ಕಾಶಿ, ಗಯಾ ಮತ್ತು ಪ್ರಯಾಗದಲ್ಲಿ ಪಿತೃಗಳಿಗೆ ಪಿಂಡ ಪ್ರಧಾನ ಮಾಡುವ ಸಮ ಪುಣ್ಯ ಸುಲಭವಾಗಿ ದೊರೆಯುತ್ತದೆ ‘ಎಲೈ ಪಾರ್ವತಿ ದೇವಿಯೇ ಹೆಚ್ಚೇಕೆ ಕೇಳು, ಮೂರು ಲೋಕದಲ್ಲಿ ಪೂರ್ವಜರಿಗೆ ಮೋಕ್ಷ ನೀಡುವ ಭೂ ಕೈಲಾಸಕ್ಕೆ ಸಮದಂಡಿಯಾಗಿ ನಿಲ್ಲುವ ತೀರ್ಥ ಕ್ಷೇತ್ರ ಮತ್ತೊಂದಿಲ್ಲ”

ಕಾರಿಂಜ ದೇವಸ್ಥಾನ

ಕ್ಷೇತ್ರ ಪುರಾಣದಲ್ಲಿ ಇರುವ ಶಿವ ಪಾರ್ವತಿಯರ ಸಂಭಾಷಣೆಗೆ ಪೂರಕ ಅನ್ನುವಂತೆ ನಮ್ಮ ಧರ್ಮ ಪಿತೃಗಳಿಗೆ ಮೀಸಲು ಇಟ್ಟ ಅಮಾವಾಸ್ಯೆಯ ತಿಥಿಯಲ್ಲಿಯೇ ದೇಗುಲದಲ್ಲಿ ಉತ್ಸವಾದಿಗಳು ನಡೆಯುತ್ತವೆ

1) ಇಲ್ಲಿ ಅಮಾವಾಸ್ಯೆಯ ತಿಥಿ ಜನ್ಮ ಪಡೆಯುವ ನಟ್ಟಿರುಳ ಹೊತ್ತು ಶಿವ ಪಾರ್ವತಿಯರ ಭೇಟಿ ನಡೆಯುತ್ತದೆ

2) ಇಲ್ಲಿ ಅಮಾವಾಸ್ಯೆಯ ನಡು ಮಧ್ಯಾಹ್ನ ಶಿವ ಪಾರ್ವತಿ ಬ್ರಹ್ಮ ರಥ ಏರಿ ಬ್ರಹ್ಮೋತ್ಸವ ನಡೆಯುತ್ತದೆ

3) ಇಲ್ಲಿ ಕಾರ್ತಿಕ ಅಮಾವಾಸ್ಯೆ ದಿನ ಶಿವ ಪಾರ್ವತಿ ದೇವಿಯ ಲಕ್ಷ ದೀಪ ಉತ್ಸವ ನಡೆಯುತ್ತದೆ

3) ಇಲ್ಲಿನ ಪ್ರತಿಯೊಂದು ಹಬ್ಬ ಆಚರಣೆಗಳು ಅಮಾವಾಸ್ಯೆಯ ದಿನವನ್ನು ಹೊಂದಿಕೊಂಡು ಇರುತ್ತದೆ

ಕಾರಿಂಜ ದೇವಸ್ಥಾನ

ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆಗೂ ಅದರದ್ದೇ ಆದ ಮಹತ್ವವಿದೆ. ಒಂದೊಂದು ತಿಥಿಯನ್ನು ಒಂದೊಂದು ದೇವ ವರ್ಗಕ್ಕೆ ನೀಡಿದೆ ಹಿಂದೂ ಧರ್ಮ. ಅದರಲ್ಲಿ ಅಮಾವಾಸ್ಯೆಯ ತಿಥಿಯನ್ನು ಪಿತೃ ದೇವತೆಗಳಿಗೆ ಮೀಸಲು ಇಟ್ಟಿದೆ ನಮ್ಮ ಸನಾತನ ಸಂಸ್ಕೃತಿ. ಅಮಾವಾಸ್ಯೆ ದಿನ ಸ್ನಾನ ಮಾಡಿ ಶಿವನಿಗೆ ತನ್ನ ಪೂರ್ವಜರಿಗೆ(ಪಿತೃಗಳಿಗೆ) ಮೋಕ್ಷಕ್ಕಾಗಿ ಬೇಡಿಕೊಂಡರೆ ಪಿತೃ ದೇವತೆಯಾದ ರುದ್ರ ದೇವರ ಮತ್ತು ನಮ್ಮ ಪಿತೃಗಳ ಅನುಗ್ರಹದಿಂದ ಕಷ್ಟಗಳು ಪರಿಹಾರ ಕಾಣುತ್ತವೆ ಅನ್ನುತ್ತದೆ ಹಿಂದೂ ಪುರಾಣಗಳು

ಪಿತೃಗಳ ಹೆಸರಲ್ಲಿ ಮಾಡುವ ದಾನಕ್ಕಿಂತ ದೊಡ್ಡ ದಾನ ಜಗತ್ತಿನಲ್ಲಿ ಇಲ್ಲ
ಒಂದು ಕೋಟಿ ಬೆಲೆಯ ಬ್ರಹ್ಮ ರಥಕ್ಕೆ ನಿಮ್ಮ ಪಿತೃಗಳ ಹೆಸರಲ್ಲಿ ದಾನ ನೀಡಿ ಆಟಿ ಅಮಾವಾಸ್ಯೆ ಮತ್ತಷ್ಟು ಪುಣ್ಯ ನೀಡಲಿ

ಆಟಿ ಅಮಾವಾಸ್ಯೆಯ ದಿನ ನಿಮ್ಮ ಗತಿಸಿ ಹೋದ ಪೂರ್ವಜರ ಹೆಸರಲ್ಲಿ ದಾನ ಮಾಡಿದರೆ ಆ ದಾನಕ್ಕೆ ಸಮನಾದ ದಾನ ಮತ್ತೊಂದಿಲ್ಲ ಅನ್ನುತ್ತದೆ ಕ್ಷೇತ್ರ ಪುರಾಣ. ಜಗತ್ತಿನ ಆದರ್ಶ ದಂಪತಿ ಹಿಂದೂ ಧರ್ಮದ ತಂದೆ ತಾಯಿ ಎಂದೇ ಭಕ್ತರು ನಂಬಿರುವ ಶಿವ ಪಾರ್ವತಿ ದೇವರು ಬ್ರಹ್ಮೋತ್ಸವದಲ್ಲಿ ಕೂರುವ ಕೋಟಿ ಬೆಲೆಯ ನೂತನ ಬ್ರಹ್ಮ ರಥಕ್ಕೆ ಬರುವ ಪ್ರತಿಯೊಂದು ಭಕ್ತರಿಗೂ ತಮ್ಮ ತಮ್ಮ ಪೂರ್ವಜರ ಹೆಸರಲ್ಲಿ ದಾನ ನೀಡಲು ಅವಕಾಶ ಸಿಗುವಂತೆ ಹುಂಡಿ ಇಡಲಾಗುತ್ತದೆ. ಒಂದೊಮ್ಮೆ ನಿಮ್ಮ ಪೂರ್ವಜರನ್ನು ನೆನೆದು ನೀವು ದಾನದ ಹುಂಡಿಗೆ ದೇಣಿಗೆ ಹಾಕಿದರೆ ನಿಮ್ಮ ಕುಲದಲ್ಲಿ ಗತಿಸಿ ಹೋದವರಿಗೆ ಸದ್ಗತಿ ಸಿಗುವುದಲ್ಲದೆ ನಿಮ್ಮ ಜಾತಕದಲ್ಲಿ ಎಷ್ಟೇ ದೊಡ್ಡ ಪಿತೃ ದೋಷ ಜಾತಾಕರ್ಮಗಳು ಇದ್ದರೂ ಕ್ಷಣ ಮಾತ್ರದಲ್ಲಿ ನಶಿಸಿ ಹೋಗುತ್ತವೆ. ನಿಮ್ಮ ಪೂರ್ವಜರು ಒಂದೊಮ್ಮೆ ಪುನರ್ಜನ್ಮ ಎತ್ತಿ ಬಂದಿದ್ದರೂ ಬಡವರಾಗಿದ್ದರೆ ಹಣದ ರೂಪದಲ್ಲಿ, ದುಃಖದಲ್ಲಿ ಇದ್ದರೆ ನೆಮ್ಮದಿಯ ರೂಪದಲ್ಲಿ, ಹಸಿವಿನಿಂದ ಇದ್ದರೆ ಆಹಾರದ ರೂಪದಲ್ಲಿ ಅಥವಾ ಹೆಚ್ಚೇಕೆ ಹೇಳಲಿ, ನಿಮ್ಮ ಪೂರ್ವಜರು ಮತ್ತೊಂದು ಜನ್ಮ ಪಡೆದು ಮರಣ ಶಯ್ಯೇಯಲ್ಲಿ ಇದ್ದರೂ ಅವರಿಗೆ ಸಂಜೀವಿನಿಯಂತ ದಿವ್ಯ ಔಷದಿ ನಿಮ್ಮ ಈ ಶ್ರೇಷ್ಠ ದಾನ ಆಗಬಲ್ಲದು. ನೀವು ಮತ್ತೊಂದು ಕಡೆ ಹೋಗಿ ಪಿತೃಗಳ ಹೆಸರಲ್ಲಿ ದಾನ ನೀಡುತ್ತೇನೆ ಅಂದರೆ ಅನ್ಯತ್ರ ಅಲಭ್ಯ ಹಾಗಾಗಿ ಸದುಪಯೋಗ ಮಾಡಿಕೊಳ್ಳಿ 🙏🏼
ದಂಪತಿ ಸ್ನಾನ ಅತ್ಯಂತ ಮಹತ್ವಪೂರ್ಣ ಮರೆಯದೆ ಸತಿ ಪತಿ ಸಮೇತ ಸ್ನಾನ ಮಾಡಿ

ಸ್ನಾನದ ಕೊಳ

ಹೊಸತಾಗಿ ಮದುವೆ ಆದವರಿಗೆ ತಮ್ಮ ಪೂರ್ವಜರ ಅನುಗ್ರಹ ಇದ್ದರೆ ಮಾತ್ರ ಸುಸಂತಾನ ಪ್ರಾಪ್ತಿಯಾಗುತ್ತದೆ. ಅವರ ಅನುಗ್ರಹದಿಂದಲೇ ದಾಂಪತ್ಯ ಸ್ಥಿರ ಕಾಣುತ್ತದೆ ನೆಮ್ಮದಿ ನೆಲಸುತ್ತದೆ ಅನ್ನುತ್ತವೆ ಹಿಂದೂ ಪುರಾಣ ಶಾಸ್ತ್ರಗಳು. ನಿಮ್ಮ ನಿಮ್ಮ ಪೂರ್ವಜರು ಸಂತುಷ್ಟರಾಗುವ ಏಕ ಮಾತ್ರ ಜಾಗ ಅದು ಭೂ ಕೈಲಾಸ. ಪ್ರತಿಯೊಬ್ಬ ದಂಪತಿಗಳು ಸ್ನಾನ ಮಾಡಿ ಜಗತ್ತಿನ ಆದರ್ಶ ದಂಪತಿಗಳಾದ ಶಿವ ಪಾರ್ವತಿ ದೇವರಲ್ಲಿ ಸುಸ್ಥಿರ ದಾಂಪತ್ಯ ಬೇಡಿಕೊಳ್ಳಿ. ಒಳ್ಳೆಯ ದಾಂಪತ್ಯಕ್ಕೆ ಕಾರಿಂಜದ ಆಟಿ ಅಮಾವಾಸ್ಯೆ ದಿವ್ಯ ಔಷದಿ

ನಾಲ್ಕು ಯುಗದಲ್ಲಿ ಕ್ಷೇತ್ರಕ್ಕೆ ಇದ್ದ ಹೆಸರುಗಳು……
ಕೃತೇ ರೌದ್ರಗಿರಿರ್ನಾಮ
ತ್ರೇತಾಯಾಮ್ ಗಜರಾಡ್ಗಿರಿ:
ದ್ವಾಪರೇ ಭೀಮಶೈಲಶ್ಚ
ಕಾರಿಂಜಸ್ತು ಕಲೌಯುಗೇll

ನಾಲ್ಕು ಯುಗದಲ್ಲಿ ಕಾರಿಂಜ ಕ್ಷೇತ್ರ ಕಟ್ಟಿದ ಚಕ್ರವರ್ತಿಗಳು

ಕೃತಾದೌಕಾರಯಾವಮಾಸ ಹರಿಶ್ಚಂದ್ರೋ ಮದಾಲಯಂll
ತ್ರೇತಾಯುಗೇ ವರ್ತಮಾನೇ ದಿಲೀಪೋನಾಮಭೂಪತಿll
ದ್ವಾಪರಾಖ್ಯೆಯುಗೇ ಭೀಮಸೇನೋನಾಮ ಮಹಾಬಲll
ಕಲೌತುಕಾರಯಾಮಾಸ ಏಕಲಾಖ್ಯಶ್ಚಭೂಮಿಪ:ll

ನಾಲ್ಕು ಯುಗದಲ್ಲಿ ದೇವರಿಗೆ ಇದ್ದ ಹೆಸರುಗಳು

ಆದಿರುದ್ರೇತಿಮನ್ನಾಮ ಪೂಜ್ಯo ಕೃತಯುಗೇ
ಗಜೇಶ್ವರರೇತಿಮಾಂ ಪ್ರಾಹುಸ್ತ್ರೇತಾಯಾo ಸರ್ವಸಿದ್ಧಿದಂ
ದ್ವಾಪರೇಮುನಯ: ಶ್ರೇಷ್ಟಾಭೀಮೇಶೇತಿ ವದಂತಿಮಾಂ
ಕಲೌಕಲುಪ ಚಿತ್ತಾಸ್ತು ಕಾರಿಂಜೇಶೇತಿಮಾಂವಿದು:

ಪಾರ್ವತಿ ಕೇಳುತ್ತಾಳೆ ಭೂ ಮಂಡಲದಲ್ಲಿ ಅತ್ಯಂತ ಪ್ರೀತಿಯ ಕ್ಷೇತ್ರ ಯಾವುದು ?

ಕೈಲಾಸಾದಧಿಕಾಪ್ರೀತಿರ್ಭೂಕೈಲಾಸ ಗಿರಾವಿಹl
ಕಲಾವಪಿವಿಶೇಷಜ್ಞಾ ಭೂಕೈಲಾಸಮಾಂವಿದು:

ಆದಿ ಕೈಲಾಸಕ್ಕಿಂತಲೂ ಒಂದು ಪಟ್ಟು ಹೆಚ್ಚು ಪ್ರೀತಿ ಶಿವನಿಗೆ ಭೂಕೈಲಾಸ ಎಂದು ಶಿವ ಪಾರ್ವತಿಗೆ ಉತ್ತರಿಸುತ್ತಾನೆ 🙏🏼🙏🏼

. ಅಧ್ಯಕ್ಷರು
ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನ