ಬಂಟ್ವಾಳ.ಡಿ.26. ಲೋಕಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ, ಪ್ರಜಾಪ್ರಭುತ್ವದ ದೇವಾಲಯ ಎಂದು ಹೇಳುವ, ಸಂಸತ್ಭವನದ ಒಳಗೆ ಇಬ್ಬರು ಯುವಕರು ಹೊಗೆಡಬ್ಬಿಯನ್ನು ಸಿಡಿಸಿರುವುದನ್ನು ಸಂಸತ್ ಒಳಗೆ ಚರ್ಚೆ ಮಾಡದೆ ಬೇರೆಲ್ಲಿ ಚರ್ಚೆ ಮಾಡಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಪ್ರಶ್ನಿಸಿದರು.
ಅವರು ಡಿ.26ರಂದು ಬಿ.ಸಿ.ರೋಡಿನಲ್ಲಿ ಬಂಟ್ವಾಳ ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ, 146 ಸಂಸದರ ಅಮಾನತು ಕ್ರಮವನ್ನು ಖಂಡಿಸಿ, ಸಂಸತ್ ಭವನದ ಭದ್ರತಾ ವೈಫಲ್ಯ ಖಂಡಿಸಿ ಪ್ರಜಾಪ್ರಭುತ್ವ ಉಳಿಸಿ ಎಂದು ಆಗ್ರಹಿಸಿ ನಡೆಸಿದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಷ್ಟ್ರೀಯ ಭದ್ರತೆ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ, ಸಂಸತ್ ಭವನದೊಳಗೆ ಭದ್ರತೆ ಲೋಪ, ಲೋಪ ಉಂಟಾದ ಸಂದರ್ಭದಲ್ಲಿ ಈ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಬೇಕು ಎಂದು ಆಗ್ರಹ ಪಡಿಸಿದ ಸಂಸದರನ್ನು ಅಮಾನತು ಮಾಡುವ ಮೂಲಕ ಪ್ರಜಾಪ್ರಭುತ್ವದ ಮೇಲೆ ಮಾರಕ ದಾಳಿ ನಡೆಸಿರುವುದು ಖಂಡನೀಯ ಎಂದರು.


ಸರ್ಕಾರ ನಿಯಮಾವಳಿಗಳನ್ನು ಧಿಕ್ಕರಿಸಿ, ಜನವಿರೋಧಿಯಾದ ಸಂದರ್ಭದಲ್ಲಿ, ವಿರೋಧ ಪಕ್ಷದಲ್ಲಿ ಯಾರೇ ಇದ್ದರೂ ಪ್ರತಿಭಟಿಸುವುದು ಅವರ ಸಂವಿಧಾನಿಕ ಹಕ್ಕು. ಅದನ್ನು ಮೊಟಕುಗೊಳಿಸುವ ಮೂಲಕ ಕೇಂದ್ರ ಸರ್ಕಾರ ಸಂವಿಧಾನ ವಿರೋಧಿಯಾಗಿದೆ. ಈ ಯುವಕರಿಗೆ ಸಂಸತ್ ಒಳಗೆ ಪ್ರವೇಶಿಸಲು ಪಾಸು ಕೊಟ್ಟಿರುವುದು ಮೈಸೂರಿನ ಬಿಜೆಪಿ ಸಂಸದ ಪ್ರತಾಪ ಸಿಂಹ ಆಗಿರುವುರಿಂದ ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ಬಿಜೆಪಿಯವರು ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ವಿರೋಧ ಪಕ್ಷಗಳ ಮೇಲೇ ಆರೋಪ ಮಾಡುವ ಕುಟಿಲ ನೀತಿಯನ್ನು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಮಂಗಳೂರು ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ಕೆ.ಎಸ್. ಸತೀಶ್ ಕುಮಾರ್ ಮಾತನಾಡಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಪುಕ್ಕಟ್ಟೆಯಾಗಿ ಬಂದಿದ್ದಲ್ಲ. ಗಾಂಧಿ, ಅಂಬೇಡ್ಕರ್, ನೆಹರು, ಲೋಹಿಯಾ, ಮೌಲನಾ ಅಜಾದ್ ರಂತಹ ಲಕ್ಷಾಂತರ ಜನ ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ, ಜಾತ್ಯತೀತ ಪ್ರಜಾಪ್ರಭುತ್ವ ದೇಶ ಕಟ್ಟಲು ಹೋರಾಡಿದ್ದಾರೆ.
ಡಿ. 13 ರಂದು ಸಂಸತ್ತಿನಲ್ಲಿ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ಯುವಕರು ಹೊಗೆ ಡಬ್ಬಿ ತಂದು ಸಿಡಿಸಿದ ಪ್ರಕರಣವನ್ನು ನಿಗೂಡ ಮತ್ತು ಜಟಿಲವನ್ನಾಗಿಸಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ಭದ್ರತೆ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ, ಸಂಸತ್ ಭವನದೊಳಗೆ ಭದ್ರತೆ ಲೋಪ ಲೋಪ ಉಂಟಾದ ಸಂದರ್ಭದಲ್ಲಿ, ಈ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಬೇಕು ಎಂದು ಆಗ್ರಹ ಪಡಿಸಿದ ಸಂಸದರನ್ನು ಅಮಾನತು ಮಾಡುವ ಮೂಲಕ ಪ್ರಜಾಪ್ರಭುತ್ವದ ಮೇಲೆ ಮಾರಕ ಧಾಳಿ ನಡೆಸಿರುವುದು ಖಂಡನೀಯ ಎಂದರು.
ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ರಾಜ್ಯ ಕಾರ್ಯದರ್ಶಿ ದಾನಿಶ್ ಚೆಂಡಾಡಿ ಮಾತಾಡಿ ಸಂಸತ್ ಭವನ ಉದ್ಘಾಟನೆಯ ಸಂದರ್ಭದಲ್ಲಿ ನಮ್ಮ ಪ್ರಧಾನ ಸೇವಕರು ಜಗತ್ತಿನಲ್ಲೇ ಸಂಸತ್ ಭವನ ಸುರಕ್ಷಿತ ವಾಗಿದೆ ಎಂದಿದ್ದರು. ಭದ್ರತಾ ಲೋಪ ಉಂಟಾದಾಗ ಅವರು ಈ ಬಗ್ಗೆ ಪ್ರಶ್ನೆ ಮಾಡಿದ ಸಂಸದರನ್ನೇ ಸಸ್ಪೆಂಡ್ ಮಾಡುವ ಮೂಲಕ ಪಲಾಯನ ಮಾಡಿದ್ದಾರೆ. ಮೋದಿ ಆಡಳಿತದಲ್ಲಿ, ಮಣಿಪುರ ಗಲಭೆ, ರೈತ ಚಳುವಳಿಯಲ್ಲಿ ದೌರ್ಜನ್ಯ, ದಲಿತರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳನ್ನು ನೋಡಿದರೆ, ಈ ಸರ್ಕಾರದಲ್ಲಿ ಜನರಿಗೆ ಭದ್ರತೆ ಇಲ್ಲ. ಆಳುವವರಿಗೆ ಮಾತ್ರ ಭದ್ರತೆ ಎಂದು ಜನ ತಿಳಿದಿದ್ದರು. ಈಗ ಅವರಿಗೂ ಭದ್ರತೆ ಇಲ್ಲವೆಂದ ಮೇಲೆ ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.


ಈ ಸಂದರ್ಭದಲ್ಲಿ ಸಂಘಟನೆಯ ನಾಯಕ ಬಿ. ಶೇಖರ್, ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಸುದೀಪ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಸುದರ್ಶನ್ ಜೈನ್, ಅಬ್ಬಾಸ್ ಆಲಿ, ಉಪಸ್ಥಿತರಿದ್ದರು. ನೇತೃತ್ವವನ್ನು ಸಮಾನ ಮನಸ್ಕರ ಸಂಘಟನೆಯ ಅಧ್ಯಕ್ಷರಾದ ಮೋಹನ್ ಶೆಟ್ಟಿ ಪಂಜಿಕಲ್ಲು, ಸಂಘಟನೆಯ ಪ್ರಧಾನ ಸಂಚಾಲಕ ಎಂ.ಎಚ್ ಮುಸ್ತಫ, ಮಾಜಿ ಅಧ್ಯಕ್ಷ ಪ್ರಕಾಶ್ ಬಿ. ಶೆಟ್ಟಿ ಶ್ರೀ ಶೈಲ ತುಂಬೆ, ಪ್ರಮುಖರಾದ ರಾಜಾ ಚೆಂಡ್ತಿಮಾರ್, ಕೇಶವ ಪೂಜಾರಿ ಪಂಜಿಕಲ್ಲು, ಬಿ.ಎಂ. ಪ್ರಭಾಕರ ದೈವಗುಡ್ಡೆ, ಇಬ್ರಾಹಿಂ ಉಳಿ, ಎಸ್.ಐ.ಓ. ಸಂಘಟನೆಯ ರಿಜ್ವಾನ್, ಜಮಾತೆ ಇಸ್ಲಾಂ ಹಿಂದ್ ನ ಅಬ್ದುಲ್ಲಾ ಚೆಂಡಾಡಿ, ಅವ್ವಾ ಜುಮ್ಮಾ ಮಸ್ಜಿದ್ ನ ಬಿ.ಮೊಹಮ್ಮದ್, ಎಐಟಿಯುಸಿ ಮುಖಂಡರುಗಳಾದ ವಿ.ಕುಕ್ಯಾನ್, ಎಂ.ಕರುಣಾಕರ, ಕೆ.ತಿಮ್ಮಪ್ಪ, ಮಾನವ ಬಂಧುತ್ವ ವೇದಿಕೆಯ ಮ್ಯಾಕ್ಸಿಂ ಕುಕ್ಕಾಜೆ, ಲೋಕೇಶ್ ಸುವರ್ಣ, ಎಐವೈಎಫ್ ನ ಶ್ರೀನಿವಾಸ ಭಂಡಾರಿ, ಮ್ಯಾಥ್ಯೂ, ಮೋಹನ ಅರಳ, ಶೇಖರ್ ಬಿಯಪಾದೆ, ಉಮ್ಮರ್ ಕುಂಞ ಸಾಲೆತ್ತೂರು, ಶಮಿತಾ, ಮಮತಾ, ಕೇಶವತಿ, ಮೋಹಿನಿ ಭಾಗವಹಿಸಿದ್ದರು. ಸಮಾನ ಮನಸ್ಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಸ್ವಾಗತಿಸಿ, ಪ್ರೇಮನಾಥ ಕೆ. ವಂದಿಸಿದರು.