ಲಯನ್ಸ್ ಕ್ಲಬ್ ಬಂಟ್ವಾಳದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮವು ಅಧ್ಯಕ್ಷರಾದ ಪ್ರಶಾಂತ್ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಅತ್ಯಂತ ಯಶಸ್ವಿಯಾಗಿ ಡಿ.19ರಂದು ನೆರವೇರಿತು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಲಯನ್ಸ್ ಜಿಲ್ಲೆ ೩೧೭ ಆ ಯ ರಾಜ್ಯಪಾಲ ಲಯನ್ ಡಾ. ಮೆಲ್ವಿನ್ ಡಿʼಸೋಜ, ಜಿಲ್ಲಾ ಸಂಪುಟ ಖಜಾಂಚಿ ಸುಧಾಕರ ಶೆಟ್ಟಿ, ಜಿಲ್ಲಾ ಲಿಯೋ ಅಧ್ಯಕ್ಷೆ ಡಾ.ರಂಜಿತಾ ಶೆಟ್ಟಿ, ಉಪರಾಜ್ಯಪಾಲರುಗಳಾದ ಬಿ.ಎಂ.ಭಾರತಿ, ಕುಡ್ಪಿ ಅರವಿಂದ ಶೆಣೈ, ಪ್ರಾಂತೀಯ ಅಧ್ಯಕ್ಷ ರಮಾನಂದ ನೂಜಿಪ್ಪಾಡಿ, ವಲಯಾಧ್ಯಕ್ಷ ಡೊನಾಲ್ಡ್ ಬಂಟ್ವಾಳ, ಕಾರ್ಯದರ್ಶಿ ಸುನೀಲ್ ಬಿ., ಖಜಾಂಚಿ ಕೇಶವ ಆಚಾರ್ಯ ಮತ್ತು ಲಿಯೋ ಖಜಾಂಚಿ ಸ್ಫಟಿಕ ಎಸ್.ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.