ಬಂಟ್ವಾಳ: ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳದಲ್ಲಿ ನಡೆದ ಕಾನೂನು ಮಾಹಿತಿ ಕಾರ್ಯಾಗಾರವನ್ನು ಪ್ರದಾನ ಸಿವಿಲ್ ನ್ಯಾಯಧೀಶ ಚಂದ್ರಶೇಖರ ತಳವಾರ ಉದ್ಘಾಟಿಸಿದರು.
ಬಂಟ್ವಾಳ ವಕೀಲರ ಸಂಘದ ಉಪಾಧ್ಯಕ್ಷ ರಾಜೇಶ್ ಬೊಳ್ಳುಕಲ್ಲು ದೇಶದ ಸಂವಿಧಾನದ ಬಗ್ಗೆ ಮಾಹಿತಿ ನೀಡಿದರು. ಹಿರಿಯ ನ್ಯಾಯವಾದಿ ಶ್ರೀಧರ ಪೈ ಬಾಲ್ಯ ವಿವಾಹದ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ಶಿಕ್ಷಣಾಧಿಕಾರಿ ಮತ್ತು ನ್ಯಾಯವಾದಿ ಹರಿಣಿ, ವಕೀಲ ಸಂಘದ ಖಜಾಂಚಿ ನಿರ್ಮಲ ಶೆಟ್ಟಿ , ನ್ಯಾಯವಾದಿ ಸತೀಶ್ ಬಿ., ಶಾಲಾ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.