ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದ ಜಾತ್ರಾ ಮಹೋತ್ಸವವು ದಿನಾಂಕ 15-02-2026 ರ ಮಹಾಶಿವರಾತ್ರಿಯ ದಿನದಿಂದ ಪ್ರಾರಂಭವಾಗಿ 19-02-2026ರ ವರೆಗೆ ನಡೆಯಲಿರುವುದು. ಇದರ ಪ್ರಯುಕ್ತ ಈ ದಿನ 14–02-2026 ರಂದು ಸಂಜೆ 7:00ಗೆ ಸರಿಯಾಗಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀ ದೇವರ ಸಾನಿಧ್ಯದಲ್ಲಿ ಬಿಡುಗಡೆಗೊಳಿಸಲಾಯಿತು. ಇದನ್ನೂ ಓದಿ : ದಟ್ಟ, ನೀಲ ಕೂದಲು ನಿಮ್ಮದಾಗಬೇಕೆ ಬಳಸಿ ಭೃಂಗರಾಜ

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ರಘುನಾಥ ಸೋಮಯಾಜಿ, ಪ್ರಧಾನ ಅರ್ಚಕರಾದ ಶ್ರೀ ಪ್ರಸನ್ನ ಹೆಗಡೆ, ಸದಸ್ಯರುಗಳಾದ ಶ್ರೀ ಲೋಕೇಶ್ ಕೆ ನರಹರಿನಗರ ,ಭುವನೇಶ್ವರಮೊಗರ್ನಾಡ್, ನವೀನ ಪುತ್ರೋಟೆ ಬೈಲು, ಉಮೇಶ್ ನೆಲ್ಲಿಗುಡ್ಡೆ, ಪ್ರಸಾದ್ ನಾಯಿಲ, ಶಂಕರನಾರಾಯಣ ರಾವ್, ಶ್ರೀಮತಿ ಜಯಲಕ್ಷ್ಮಿ ಪ್ರೇಮನಾಥ ಶೆಟ್ಟಿ, ಶ್ರೀಮತಿ ಚಂದ್ರಾವತಿ, ಲೋಕೇಶ್ ಮೆಸ್ಕಾಂ, ಸುದೇಶ್ ಮೈಯ್ಯ ಬಂಗಲಗುಡ್ಡೆ, ಹಾಗೂ ಇನ್ನಿತರ ಭಕ್ತಾದಿಗಳು ಉಪಸ್ಥಿತರಿದ್ದರು.