ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕಲ್ಪನೆ ಜಂಕ್ಷನ್ ನಲ್ಲಿ ಸಾಮಾಜಿಕ ಕಾರ್ಯಕರ್ತ, ಬಿಲ್ಲವ ಮುಖಂಡರಾಗಿದ್ದ ಪಚ್ಚಿನಡ್ಕ ದಿವಂಗತ ಕೆ.ಸೇಸಪ್ಪ ಕೋಟ್ಯಾನ್ ಸ್ಮಾರಕ ವೃತ್ತ ನಿರ್ಮಾಣಕ್ಕೆ ಸ್ಮಾರಕ ವೃತ್ತ‌ ನಿರ್ಮಾಣ ಸಮಿತಿ‌ಯ ಗೌರವಾಧ್ಯಕ್ಷ ಮಾಜಿ‌ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು.
ಗೌರವ ಸಲಹೆಗಾರ ವಂ| ಫಾ| ಅರುಣ್ ಪಿಂಟೋ, ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಚಾಲಕರಾದ ಸದಾನಂದ ಶೆಟ್ಟಿ ರಂಗೋಲಿ, ಬೇಬಿ ಕುಂದರ್ ಬಂಟ್ವಾಳ ಹಾಗೂ ಸಮಿತಿಯ ಪದಾಧಿಕಾರಿಗಳಾದ ಡಿ.ಚಂದ್ರಶೇಖರ ಭಂಡಾರಿ, ಶಿವಪ್ರಸಾದ್ ಕನಪಾಡಿ, ಇಬ್ರಾಹೀಂ ನವಾಝ್ ಬಡಕಬೈಲು, ಗುತ್ತಿಗೆದಾರ ದಿವಾಕರ್, ಕಳ್ಳಿಗೆ ಗ್ರಾ.ಪಂ.ಅಧ್ಯಕ್ಷ ಪುರುಷೋತ್ತಮ್ ಕೊಟ್ಟಾರಿ, ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ್, ಕಳ್ಳಿಗೆ ಗ್ರಾ.ಪಂ.ಸದಸ್ಯ ವಿಜಯ ಡಿʼಸೋಜ, ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಸಾಲಿಯಾನ್, ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ತುಂಬೆ, ಪ್ರಮುಖರಾದ ಕೆ.ಪಿ ಶೆಟ್ಟಿ, ದಿ| ಸೇಸಪ್ಪ ಕೋಟ್ಯಾನ್ ಪುತ್ರ ಭುವನೇಶ್ ಪಚ್ಚಿನಡ್ಕ ಹಾಗೂ ಕುಟುಂಬಸ್ಥರು, ಮಲ್ಲಿಕಾ ವಿ. ಶೆಟ್ಟಿ, ಜಯಂತಿ ಪೂಜಾರಿ, ಚಂದ್ರಹಾಸ ಪಳ್ಳಿಪಾಡಿ, ಕಮಲಾಕ್ಷ ಧನುಪೂಜೆ ಮತ್ತು ಕಲ್ಪನೆ ಆಟೋರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.