ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ‘ಚಿಣ್ಣರಲೋಕ’ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ, ಚಿಣ್ಣರಲೋಕ ಸೇವಾಬಂಧು (ರಿ.) ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿಕರಾವಳಿ ಕಲೋತ್ಸವ 2023-24 (16 ದಿನದ ಬೃಹತ್ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ) ಡಿ.30ರಿಂದ ಪ್ರಾರಂಭಗೊಂಡು ಜ.14 ವರೆಗೆ, ಸಂಜೆ ಗಂಟೆ 5.೦೦ರಿಂದ ಬಿ.ಸಿ.ರೋಡು ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ ನಡೆಯಲಿದೆ ಎಂದು ಕರಾವಳಿ ಕಲೋತ್ಸವ ಅಧ್ಯಕ್ಷ ಸುದರ್ಶನ್‌ ಜೈನ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ಕಾರ್ಯಕ್ರಮದ ಪ್ರಯುಕ್ತ ಡಿ.30 ಸಂಜೆ ಗಂಟೆ 5ಕ್ಕೆ ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಕರಾವಳಿ ಕಲೋತ್ಸವ ಮೈದಾನಕ್ಕೆ ಜಾನಪದ ದಿಬ್ಬಣ ಮೆರವಣಿಗೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಬಂಟ್ವಾಳ ಕ.ಆ.ಸೇ. ತಹಶೀಲ್ದಾರರು ಹಾಗೂ ದಂಡಾಧಿಕಾರಿ ಎಸ್. ಬಿ. ಕೂಡಲಗಿ ಉದ್ಘಾಟಿಸುವರು. ವಸ್ತು ಪ್ರದರ್ಶನ ಮಳಿಗೆಯನ್ನು ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್, ಕೀರ್ತಿಶೇಷ ಶ್ರೀ ಮಂಜು ವಿಟ್ಲ ಕಲಾ ವೇದಿಕೆಯನ್ನು
ದಕ್ಷಿಣ ಲೋಕಸಭಾ ಕ್ಷೇತ್ರ ಸಂಸದ ನಳಿನ್ ಕುಮಾರ್ ಕಟೀಲು, ಅಮ್ಯೂಸ್‌ಮೆಂಟ್ ಪಾರ್ಕನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಕೀರ್ತಿಶೇಷ ಶ್ರೀ ಸೇಸಪ್ಪ ಕೋಟ್ಯಾನ್, ಪಚ್ಚಿನಡ್ಕ ಸಭಾಂಗಣವನ್ನು
ಮಾಜೆ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದಾರೆ.
ಸಂಜೆ ಗಂಟೆ 6.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಕರಾವಳಿ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಚೊಕ್ಕಬೆಟ್ಟು ಎವೈಎಸ್‌ ಅಧ್ಯಕ್ಷ ಮೌಲನಾ ಅಬ್ದುಲ್ ಅಝೀಝ್ ದಾರಿಮಿ, ಮಿತ್ತಬೈಲ್ ಅಲ್ ಜಝರಿ ಬಹು| ಇರ್ಷಾದ್ ಹುಸೈನ್ ದಾರಿಮಿ, ಮೊಡಂಕಾಪ್‌ ಇನ್ಫೆಂಟ್ ಜೀಸಸ್ ಚರ್ಚ್ ನ ವಂ. ಧರ್ಮಗುರು ವಲೇರಿಯನ್ ಡಿ’ಸೋಜ ಉಪಸ್ಥಿತಲಿರುವರು.