ಬಂಟ್ವಾಳ ಕಸ್ಬಾ ಗ್ರಾಮದ ಕುದನೆಗುಡ್ಡೆ ಶಾಲಾ ವಠಾರದಲ್ಲಿ ಹಾಕಿದ ರಂಗಮಂಟಪದಲ್ಲಿ ಡಿ.30 ಮಂಗಳೂರು ಸಸಿಹಿತ್ಲು ಶ್ರೀ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ನಡೆಯಲಿದೆ. ಕಾರ್ಯಕ್ರಮದ ಪ್ರಯುಕ್ತ ಸಂಜೆ ಗಂಟೆ 5.45ಕ್ಕೆ ಚೌಕಿ ಪೂಜೆ, ರಾತ್ರಿ ಗಂಟೆ 7.30ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದು ಕಾರ್ಯಕ್ರಮದ ಪ್ರಾಯೋಜಕ ದಿನೇಶ್ ಪೂಜಾರಿ ಕುದನೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ