ಪೆರ್ನೆ ಕಳೆಂಜ, ದೇಂತಡ್ಕ, ಬಿಳಿಯೂರು ಶ್ರೀ ವಿಷ್ಣಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಡಿ.28 ರಿಂದ 29ರ ತನಕ ಶ್ರದ್ಧಾ ಭಕ್ತಿಯಿಂದ ನಡೆಯಲಿದೆ. ಕಾರ್ಯಕ್ರಮದ ಪ್ರಯುಕ್ತ ಡಿ.28 ರಂದು ಬೆಳಗ್ಗೆ ಗಂಟೆ 10ಕ್ಕೆ ಹಸಿರು ಹೊರೆಕಾಣಿಕೆ ಸಮರ್ಪಣೆ, ಬೆಳಗ್ಗೆ ಗಂಟೆ 8ಕ್ಕೆ ದೇವತಾ ಪ್ರಾರ್ಥನೆ, ಆಚಾರ್ಯವರಣ ಸ್ವಸ್ತಿ ಪುಣ್ಯಾಹವಾಚನ, ಮಹಾಗಣಪತಿ ಹೋಮ,
ಚಂಡಿಕಾ ಹೋಮ, ಮಹಾವಿಷ್ಣುಯಾಗ, ಬೆಳಗ್ಗೆ ಗಂಟೆ 9.30ಕ್ಕೆ ಉಗ್ರಾಣ ಮುಹೂರ್ತ, ಬೆಳಗ್ಗೆ ಗಂಟೆ 11ಕ್ಕೆ ಹೋಮದ ಪೂರ್ಣಾಹುತಿ, ಬೆಳಗ್ಗೆ ಗಂಟೆ 12.30ಕ್ಕೆ ಸುವಾಸಿನಿ ಪೂಜೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 4ರಿಂದ 7.30ರ ತನಕ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 8ಕ್ಕೆ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂರ್ಪಣೆ ನಡೆಯಲಿದೆ.
ಡಿ.29ರಂದು ಬೆಳಗ್ಗೆ ಗಂಟೆ 8 ರಿಂದ ಮಹಾಗಣಪತಿ ಹೋಮ, ಕಲಶ ಪೂಜೆ, ಬೆಳಗ್ಗೆ ಗಂಟೆ 10 ರಿಂದ 12ರ ವರೆಗೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಗಂಟೆ 11ರಿಂದ ಶ್ರೀ ದೇವರಿಗೆ ಕಲಶಾಭಿಷೇಕ, ಕ್ಷೇತ್ರದ ದೈವಗಳಿಗೆ ಮತ್ತು ನಾಗದೇವರಿಗೆ ತಂಬಿಲ ಸೇವೆ, ತುಲಾ ಭಾರ ಸೇವೆ, ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.