ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ ಡಿ.೯ರಂದು ಕಲ್ಲಡ್ಕ ಹನುಮಾನ್ ನಗರದ ವಿಶಾಮ ಮೈದಾನದಲ್ಲಿ ಸಂಜೆ ನಡೆಯಿತು.
ಸಂಜೆಯಿಂದ ರಾತ್ರಿಯವರೆಗೆ ನಡೆದ ನಾನಾ ಸಾಹಸ ಚಟುವಟಿಕೆಯಲ್ಲಿ ಸಂಸ್ಥೆಯ ಪೂರ್ವ ಪ್ರಾಥಮಿಕದಿಂದ ತೊಡಗಿ, ಪದವಿ ವಿದ್ಯಾರ್ಥಿಗಳವರೆಗೆ ೩೫೦೦ ಆಧಿಕ ವಿದ್ಯಾರ್ಥಿಗಳು ಭಾಗವಹಿಸಿದರು.
ಮಾಜಿ ಸಿ.ಎಂ. ಕುಮಾರಸ್ವಾಮಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ನೂರಾರು ಗಣ್ಯರು ಪಾಲ್ಗೋಂಡರು.
ಸಂಸ್ಥೆಯ ಸಂಸ್ಥಾಪಕ ಮತ್ತು ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಪ್ರಾಸ್ತವಿಕ ಮಾತನಾಡಿದರು. ಶಾಲಾ ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್ ಉಪಸ್ಥಿತರಿದ್ದರು.
ರಾಷ್ಟ್ರಮಟ್ಟದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಬಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಶಿಶು ನೃತ್ಯದಲ್ಲಿ ಸಂಸ್ಕೃತ ಹಾಡಿಗೆ ನೃತ್ಯ, ಘೋಷ್ ಪ್ರದರ್ಶನ, ಜಡೆ ಕೋಲಾಟ, ನಿಯುದ್ಧ, ದೀಪಾರತಿಗಳು ನಡೆದ ಬಳಿಕ ಯೋಗಾಸನದ ಮೂಲಕ ವಿವಿಧ ಯೋಗಗುಚ್ಛಗಳನ್ನು ರಚಿಸಲಾಯಿತು.