ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ನಳಿನಿ ಅವರ ಪುತ್ರಿ ಕಾವ್ಯ ಎಸ್ಎಲ್ಇ ಎಂಬ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು , ಚಿಕಿತ್ಸಾ ವೆಚ್ಚವಾಗಿ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಂದ ಸಂಗ್ರಹವಾದ 2. ಲಕ್ಷ್ಯ ರೂ. ಚೆಕ್ಕನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೊಂಕೋಡಿ ಕೃಷ್ಣ ಭಟ್ , ಕೋಶಾಧಿಕಾರಿ ಅಚ್ಯುತ ನಾಯಕ್, ವಿವೇಕಾನಂದಕನ್ನಡ ಮಾಧ್ಯಮದ ಆಡಳಿತ ಮಂಡಳಿ ಸದಸ್ಯರಾದ ಸುಬ್ರಹ್ಮಣ್ಯ ಭಟ್ ಕೆದಿಲ, ಡಾ.ಕಮಲಾ ಪ್ರಭಾಕರ ಭಟ್, ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ ಎನ್., ಪ್ರೌಢಶಾಲಾ ಶಿಕ್ಷಣ ಪರಿವೀಕ್ಷಕರಾದ ಲಕ್ಷ್ಮೀ ರಘುರಾಜ್, ಸುಧಾ ಸೂರ್ಯನಾರಾಯಣ ಭಟ್, ಮುಖ್ಯಶಿಕ್ಷಕ ಗೋಪಾಲ ಎಂ. ಉಪಸ್ಥಿತರಿದ್ದರು.