ಡಿಸೆಂಬರ್ 15ರಿಂದ ಜನವರಿ 15ರ ವರೆಗೆ ಸೌಲಭ್ಯ ಲಭ್ಯ

ಮಂಗಳೂರು: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಾರ್ಷಿಕ ಆರೋಗ್ಯ ತಪಾಸಣೆ ಯೋಜನೆಯಡಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ಮತ್ತು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಎಲ್ಲಾ ಆರೋಗ್ಯ ತಪಾಸಣೆಗಳ ಮೇಲೆ 25 ಶೇಕಡ ರಿಯಾಯಿತಿ ನೀಡಲಾಗಿದೆ.

2023ರ ಡಿಸೆಂಬರ್ 15ರಿಂದ 2024ರ ಜನವರಿ 15ರ ವರೆಗೆ ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಮತ್ತು ಕಂಕನಾಡಿಯಲ್ಲಿ ಈ ಆರೋಗ್ಯ ತಪಾಸಣೆ ರಿಯಾಯಿತಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ.

ಎಲ್ಲಾ ರೀತಿಯ ಸಾಮಾನ್ಯ ಆರೋಗ್ಯ ತಪಾಸಣೆ, ಎಲ್ಲಾ ರೀತಿಯ ಸಮಗ್ರ ಆರೋಗ್ಯ ತಪಾಸಣೆ, ಸಂಪೂರ್ಣ ಹೃದಯ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ, ಮಹಿಳೆಯರ ಆರೋಗ್ಯ ತಪಾಸಣೆ, ಹಿರಿಯರ ಆರೋಗ್ಯ ತಪಾಸಣೆ ಸಹಿತ ಮೊದಲಾದ ಆರೋಗ್ಯ ತಪಾಸಣೆ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ಮೊ. ಸಂಖ್ಯೆ 9449544661 ಹಾಗೂ ಫಾದರ್ ಮುಲ್ಲರ್ ಆಸ್ಪತ್ರೆ ತುಂಬೆ ಮೊ. ಸಂಖ್ಯೆ 9980100070 ಯನ್ನು ಸಂಪರ್ಕಿಸುವಂತೆ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.